News & Events

ಸಂಪೂರ್ಣ ಶಿಲಾಮಯವಾಗಿ ಸುಂದರವಾಯಿತು ಆನೆಕೆರೆ ಬಸದಿ

ಪಶ್ಚಿಮ ಘಟ್ಟದ ತಪ್ಪಲಿನ ಕರಿಯ ಕಲ್ಲಿನ ಮೇಲೆ ನಿಂತ ಕಾರ್ಕಳದ ಊರಲ್ಲಿ ಕೆರೆಯ ಮಧ್ಯೆ ಕಳೆದ 500 ವರ್ಷಗಳಿಂದ ಆರಾಧನೆಯಾಗುತ್ತಾ ಬರುತ್ತಿದೆ ಆನೆಕೆರೆ ಬಸದಿ. ಈ ಬಸದಿಯನ್ನು ಸಂಪೂರ್ಣ ಶಿಲಾಮಯವಾಗಿಸುವತ್ತ ಕಾರ್ಯಗಳು ಭರದಿಂದ ನಡೆಯುತ್ತಿದ್ದು ಜನವರಿ ತಿಂಗಳ 18 ನೇ ತಾರೀಕಿನಿಂದ 22ರವರೆಗೆ ಇಲ್ಲಿ ಪಂಚ ಕಲ್ಯಾಣದಂತಹ ಪುಣ್ಯ ಕಾರ್ಯ ಗಳು ನಡೆಯಲಿದೆ.

ಕಾರ್ಕಳದಲ್ಲಿ 26 ಎಕ್ರೆ ವಿಸ್ತೀರ್ಣ ವ್ಯಾಪ್ತಿಯಲ್ಲಿರುವ ಈ ಆನೆಕೆರೆಯನ್ನು ಭೈರವರಸರ ಆನೆಗಳಿಗೆ ನೀರನ್ನು ಕುಡಿಸಲು ಹಾಗೂ ಸ್ನಾನ ಮಾಡಿಸಲು ನಿರ್ಮಾಣ ಮಾಡಲಾಗಿತ್ತು. ಈ ಕೆರೆಯ ಮಧ್ಯೆ ಭೈರವರಸರ ವಂಶಸ್ಥ ಪಾಂಡ್ಯನಾಥ ಪಾಡ್ಯದ್ದೊಡೆಯರು ದಿನಾಂಕ 16-5- 1545ರಲ್ಲಿ ಪ್ರತಿಷ್ಠಾಪನೆಗೊಳಿಸಿದ ಚತುರ್ಮುಖ ಕೆರೆ ಬಸದಿಯಲ್ಲಿ ಭ. ಆದಿನಾಥ ಸ್ವಾಮಿ, ಭ.ಶ್ರೀ ಚಂದ್ರನಾಥ ಸ್ವಾಮಿ, ಭ. ಶ್ರೀ ಶಾಂತಿನಾಥ ಸ್ವಾಮಿ, ಭ. ಶ್ರೀ ಮಹಾವೀರ ಸ್ವಾಮಿ, ಅಂದಿ ನಿಂದಲೂ ಆರಾಧನೆಯಾಗುತ್ತಾ ಬರುತ್ತಿ ದ್ದಾರೆ. ಮೇಗಿನ ನೆಲೆಯಲ್ಲಿ ಭ. ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಮಹಾ ಮಾತೆ ಶ್ರೀ ಪದ್ಮಾವತಿ ದೇವಿ ಪೂರ್ವಾಬಿಮುಖವಾಗಿ ಪ್ರತಿಷ್ಠೆಗೊಂಡು ಪೂಜಿಸ ಲ್ಪಡುತ್ತಿದ್ದಾರೆ. ಈ ಸ್ಥಳದಲ್ಲಿ ಸ್ಥಳ ಪ್ರಶ್ನೆ ನಡೆದಾಗ ಈ ಕ್ಷೇತ್ರದ ಜೀರ್ಣೋದ್ದಾರ ಮತ್ತು ಪುನರ್ ಪ್ರತಿಷ್ಟೆ ನೆರವೇರಿಸಿದರೆ ಇಡೀ ಕ್ಷೇತ್ರ ಪ್ರಸಿದ್ದಿ ಪಡೆಯಲಿದೆ ಎಂದು ತಿಳಿದು ಬಂದಿತ್ತು. ಈ ಪ್ರಶ್ನೆಯ ಪ್ರಕಾರ ಇಲ್ಲಿ ಇಂದು ಸಂಪೂರ್ಣ ಶಿಲಾಮಯ ವಾದ ಬಸದಿ ನಿರ್ಮಾಣಗೊಳ್ಳುತ್ತಿದೆ.

ರಾಜಗುರು ಧ್ಯಾನಯೋಗಿ ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿಗಳು, ಪ.ಪೂ. 108 ಮುನಿಶ್ರೀ ಅಮೋಘ ಕೀರ್ತಿ ಮಹಾರಾಜ್, ಪ.ಪೂ 108 ಮುನಿಶ್ರೀ ಅಮರ ಕೀರ್ತಿ ಮಹಾರಾಜ್, ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮ ವಿಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಡಾ.ಎಂ. ಎನ್. ರಾಜೇಂದ್ರ ಕುಮಾರ್ ರವರು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಕಾರ್ಯಾಧ್ಯಕ್ಷರಾಗಿ ಮಹಾವೀರ ಹೆಗ್ಡೆ ಮುಡಾರು ಸಂಚಾಲಕರಾಗಿ ನೇಮಿರಾಜ ಅರಿಗ, ಪ್ರಧಾನ ಕಾರ್ಯದರ್ಶಿಯಾಗಿ ಭರತ್ ಕುಮಾರ್ ಜೈನ್ ಇರ್ವತ್ತೂರು, ಕೋಶಾಧಿಕಾರಿಯಾಗಿ ಶೀತಲ್ ಜೈನ್ ಶಿರ್ಲಾಲು, ಜತೆ ಕಾರ್ಯದರ್ಶಿಯಾಗಿ ನ್ಯಾಯವಾದಿ ಸೂರಜ್ ಜೈನ್, ಪ್ರಕಾಶ್ ಬಲಿಪ ಮಿಯ್ಯಾರು, ಸಂಪತ್ ಜೈನ್ ಕಾರ್ಕಳ, ಗೌರವ ಸಲಹೆಗಾರರಾಗಿ: ಕೆ. ರತ್ನಾಕರರಾಜ್‌, ಅರಸು ಕಿನ್ಯಕ್ಕ ಬಲ್ಲಾಳ್ ಪಡುಬಿದ್ರೆ ಬೀಡು, ಅಭಯ ಚಂದ್ರ ಜೈನ್ ಮೂಡಬಿದ್ರೆ, ನ್ಯಾಯವಾದಿ ಎಂಕೆ. ವಿಜಯ ಕುಮಾರ್, ಮೊತ್ತೇಸರರಾಗಿ ಉದಯ ಕಡಂಬ ನೆಲ್ಲಿಕಾರು, ಉಪಾಧ್ಯಕ್ಷರಾಗಿ ಕೆ. ಗುಣಪಾಲ ಕಡಂಬ, ಶಿರ್ಲಾಲು, ವೈ ಸೂರಜ್ ಕುಮಾರ್ ಪಟ್ಟ ಶೆಟ್ಟಿ, ದಾನ ಶಾಲೆ, ಪುಷ್ಪರಾಜ್ ಜೈನ್ ಮಂಗಳೂರು, ಎಂ.ಕೆ. ಸುವೃತ ಕುಮಾರ್ ಕಾರ್ಕಳ, ವೃಷಭರಾಜ ಕಡಂಬ, ಕುಕ್ಕುಂದೂರು, ಶ್ರೀವರ್ಮ ಜೈನ್ ಕಾರ್ಕಳ, ಮಹೇಂದ್ರವರ್ಮ ಜೈನ್ ಮೂಡಬಿದ್ರೆ ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ.