News & Events

ಆನೆಕೆರೆ ಬಸದಿಗೆ ಡಾ. ಡಿ. ವಿರೇಂದ್ರ ಹೆಗ್ಗಡೆ ಭೇಟಿ

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರು ಜೂ. 17ರಂದು ಆನೆಕೆರೆ ಬಸದಿಗೆ ಭೇಟಿ ನೀಡಿ ಬಸದಿಯ ಜೀರ್ಣೋದ್ಧಾರ ಕಾರ್ಯಗಳ ಪರಿಶೀಲನೆ ನಡೆಸಿದರು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಮಹಾವೀರ ಹೆಗ್ಡೆ, ಸಂಚಾಲಕ ನೇಮಿರಾಜ್‌ ಆರಿಗ, ಕಾರ್ಯದರ್ಶಿ ಭರತ್‌ ಜೈನ್‌, ಕೋಶಾಧಿಕಾರಿ ಶೀತಲ್‌ ಜೈನ್‌ ಶಿರ್ಲಾಲು, ಸದಸ್ಯರಾದ ರಾಜೇಶ್‌ ಜೈನ್‌ ಮತ್ತು ಚಿರಂಜೀವಿ ಜೈನ್‌ ಉಪಸ್ಥಿತರಿದ್ದರು.

ಕಾರ್ಕಳ ಜೈನ ಮಠಾಧೀಶರಾದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮಿಯವರ ನೇತೃತ್ವ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಜೀಣೊìದ್ಧಾರ ಸಮಿತಿ ಅಧ್ಯಕ್ಷರಾಗಿ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ಗೌರವ ಸಲಹೆಗಾರರಾಗಿ ಕೆ. ರತ್ನಾಕರ್‌ ರಾಜ್‌, ಕೆ. ಅಭಯಚಂದ್ರ ಜೈನ್‌ ಮೂಡಬಿದ್ರೆ, ಎಂ.ಕೆ. ವಿಜಯ ಕುಮಾರ್‌ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅತ್ಯಂತ ಪುರಾತನ ಹಾಗೂ ಆಕರ್ಷಣೀಯ ವಾಗಿರುವ ಆನೆಕೆರೆ ಬಸದಿ ಮೂಲಸ್ವರೂಪಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಅಭಿವೃದ್ಧಿಪಡಿಸಬೇಕು. ಸುಂದರ ಆನೆಕೆರೆ ಬಸದಿಯ ಗತವೈಭವ ಮುಂದಿನ ಜನಾಂಗವೂ ಕಣ್ತುಂಬಿಕೊಳ್ಳುವಂತಿರಲಿ ಎಂಬ ಆಶಯವೂ ಇದೆ.